ಪ್ರಧಾನ ದೇವಾಲಯಕದಕೆ ಪಶ್ಚಿಮ ದಿಕ್ಕಿನಲ್ಲಿ ಸುಮಾರು ಒಂದುವರೆ(1 1/2) ಕಿ.ಮೀ ದೂರದಲ್ಲಿ ರುದ್ರಾಕ್ಷ ಮಠ ಇರುವದು. ನಿರ್ಮಾಣ ಶೈಲಿಯ ಪ್ರಕಾರ ಈ ಮಠವು 9-10ನೇ ಶತಾಬ್ಧಿಗಳಲ್ಲಿ ನಿರ್ಮಾಸಿರುವುದಾಗಿ ಭಾವಿಸಬಹುದು. ಪೂರ್ವ ಮುಖವಾಗಿ ಗರ್ಭಾಲಯ ಮತ್ತು ಮುಖಮಂಟಪಗಳಿಂದೊಡಗೂಡಿರುವ, ಈ ಮಠದ ಹೊರಗಡೆ ಮುಂಭಾಗದಲ್ಲಿ ಆರುಕಂಭಗಳಿಂದ ಸಾವಡಿಗಳು ಇರುವವು. ಈ ಸಾವಡಿಗಳಲ್ಲಿ ಎಡಗಡೆ (ದಕ್ಷಿಣ ಭಾಗದಲ್ಲಿ) ಮಾರು 10 ಅಡಿಗಳ ಎತ್ತರವಿರುವ ಹುತ್ತು ದರ್ಶನವನ್ನಿಯ್ಯುತ್ತಿರುವದು.ಸುಮಾರು 7.50 ಅಡಿಗಳ ಎತ್ತರ ಅಷ್ಟೇಅಗಲವುಳ್ಳ ಸುಂದರವಾದ ಶಿವಲಿಂಗವು ಇಲ್ಲಿಯ ಗರ್ಭಾಲಯದಲ್ಲಿ ದರ್ಶಣವನ್ನಿಯ್ಯುತ್ತಿರುವದು. ರುದ್ರಾಕ್ಷಮಾಲೆಯನ್ನು ಧರಿಸಿದಂತೆ ಕೆತ್ತಲ್ಪಟ್ಟಿರುವ ಈ ಶಿವಲಿಂಗಕ್ಕೆ ಜಟಾಜೂಟವಯ ಕೂಡಾ ಇದ್ದಂತೆ ತೋರಿಸಲಾಗಿದೆ. ಭಕ್ತರು ಈ ಶಿವಲಿಂಗಕ್ಕೆ ನಿತ್ಯಾರ್ಚನೆಗಳನ್ನು ಗೈಯ್ಯುತ್ತಿರುವರು. ಗರ್ಭಾಲಯದ ಎದುರಿಗೆ ಸುಂದರವಾದ ಕಪ್ಪುಕಲ್ಲಿನ ನಂದಿ ವಿಗ್ರಹವು ಕಾಣುವದು. ಇನ್ನ ಗರ್ಭಾಲಯದ ದ್ವಾರದ ಮೇಲೆ ಎರಡುಕಡೆ ಆನೆಗಳಿಂದಿರುವ ಶಿವಲಿಂಗವು ಕೆತ್ತಲ್ಪಟ್ಟಿರುವದು. ಈ ಶಿಲೆಯಲ್ಲಿ ಆನೆಗಳು ಶಿವಲಿಂಗವನ್ನು ಪೂಜಿಸುತ್ತಿದಂತೆ. (ಹೂಮಾಲೆಯನ್ನು ಸಮರ್ಪಿಸುತ್ತಿದ್ದಂತೆ) ತೋರಲಾಗಿದೆ. ಆಲಯಗಳಲ್ಲಿ ಸಾಧಾರಣವಾಗಿ ದ್ವಾರದ ಮೇಲೆ ಹೆಚ್ಚಾಗಿ ಗಜಲಕ್ಷ್ಮಿಯನ್ನು ಕೆತ್ತಿರುವು ದುಂಟು ಇಲ್ಲಿ ಆನೆಗಳು ಪೂಜಿಸುತ್ತಿರುವ ಶಿವಳಿಂಗವು ಎಷ್ಟೋವಿಶೇಷವೆಂದೇ ಹೇಳಬಹುದಾಗಿದೆ. ಈ ದ್ವಾರಕ್ಕೆ ಎರಡು ಕಡೆ (ದ್ವಾರಪಾಲಕರ ಸ್ಥಾನದಲ್ಲಿ) ಬಲಗಡೆ ಚಾಮರಸುಂದರಿಯ ಶಿಲ್ಪಿಗಳು ಕೆತ್ತಲ್ಪಟ್ಟಿರುವವು.ಮತ್ತು ಸುಮಾರು 34 ಅಡಿಗಳ ಉದ್ದ 44 ಅಡಿಗಳ ಅಗಲ ಉಳ್ಳ ಇಲ್ಲಿಯ ಮಂಟಪವು 24 ಕಂಭಗಳಿಂದ ನಿರ್ಮಾಣಗೊಂಡಿರುವುದು. ಪೂರ್ವ ದಿಕ್ಕಿನಲ್ಲಿ ಪ್ರವೇಶದ್ವಾರವಿರುವ ಈ ಮಂಟಪಕ್ಕೆ ಉತ್ತರ ದಿಕ್ಕಿನಲ್ಲಿ ಕೂಡಾ ಮತ್ತೊಂದು ಪ್ರವೇಶ ದ್ವಾರವಿರುವದು. ಮುಖಮಂಟಪದ ಒಳಭಾಗದಲ್ಲಿ ಪಶ್ಚಿಮ, ದಕ್ಷಿಣ, ಉತ್ತರ ದಿಕ್ಕುಗಳಲ್ಲಿ ಕಟ್ಟೆಗಳು ನಿರ್ಮಿಸಲಾಗಿರುವವು. ಮತ್ತು ಈ ಮುಖಮಂಟಪದಲ್ಲಿ ದಕ್ಷಿಣ ದಿಕ್ಕಿನಲ್ಲಿ ಎರಡು ಕಂಭಗಳ ಮಧ್ಯದಲ್ಲಿ ಒಂದು ಉಪಾಲಯವು ಕಂಡುಬರುವದು. ದ್ವಾರವು ಕೂಡಾ ಇರುವ ಈ ಉಪಾಲಯದಲ್ಲಿ ಸಧ್ಯ ಯಾವ ದೇವತಾ ಮೂರ್ತಿಯು ಇರುವುದಿಲ್ಲ. ಈ ಉಪಾಲಯ ದ್ವಾರದ ಮೇಲ್ಭಾಗದಲ್ಲಿ (ಸಾಧಾರಣವಾಗಿ ಗಜಲಕ್ಷ್ಮಿ ಇರುವ ಜಾಗದಲ್ಲಿ) ವೃಷಭಾರೂಢಮೂರ್ತಿ (ನಂದಿವಾಹನನಾದ ಶಿವನು) ಯನ್ನು ಕೆತ್ತಲ್ಪಟ್ಟಿರುವದು. ಅದೇ ರೀತಿಯಾಗಿ ದ್ವಾರದ ಎರಡೂ ಕಡೆ ದ್ವಾರ ಪಾಲಕರನ್ನು ಕೆತ್ತಲ್ಪಟ್ಟಿರುವರು.